ಶ್ರೀ ಅರವಿಂದರ ೩೫ ಹಾಗೂ ಶ್ರೀ ಮಾತೆಯವರ ೧೭ ಬೃಹತ್ ಗ್ರಂಥಗಳಿಂದ ಪ್ರತಿ ತಿಂಗಳ ಸೂಕ್ತವಾದ ವಿಷಯಗಳನ್ನು ಆಯ್ದುಕೊಂಡು 'All India Magazine' ಮಾಸ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದೆ. ೧೯೭೨ರಲ್ಲಿ 'All India Magazine' ಮಾಸಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಈ ಪತ್ರಿಕೆಯನ್ನು ಭಾರತದ ವಿವಿಧ ಭಾಷೆಗಳಲ್ಲಿ ಅನುವಾದಿಸಲಾಗುತ್ತದೆ. ಹೀಗೆ ಪ್ರಕಟಗೊಳ್ಳುತ್ತಿರುವ ಮಾಸಪತ್ರಿಕೆಯ ಅನುವಾದ ಪ್ರಪ್ರಥಮವಾಗಿ ಕನ್ನಡದಲ್ಲಾಯಿತು. ಕನ್ನಡದ ಮಾಸ ಪತ್ರಿಕೆಗೆ 'ಅಖಿಲ ಭಾರತದ ಪತ್ರಿಕೆ ' ಎಂದು ಹೆಸರು.